ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಭಾರಿ ಬಿರುಗಾಳಿ ಮಳೆಗೆ ಕಲ್ಯಾಣ ಮಂಟಪಕ್ಕೆ ಹಾಕಿದ್ದ ಶಾಮಿಯಾನ ಹಾರಿ ಹೋಗಿದೆ. ತಗಡಿನ ಶೀಟ್ಗಳ ಸಮೇತ ಶಾಮಿಯಾನ ಬಿದ್ದ ಪರಿಣಾಮ ಇಬ್ಬರಿಗೆ ಗಾಯಗಳಾಗಿವೆ. ಮಳೆಯ ಅಬ್ಬರದಿಂದ ಜನ ಭಯಭೀತರಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.