ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ತೀವ್ರ ಅವಾಂತರ ಸೃಷ್ಟಿಯಾಗಿದೆ. ಎಚ್ಬಿಆರ್ ಲೇಔಟ್ನಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನಗಳು ಮುಳುಗಡೆಯಾಗಿದ್ದರೆ, ಹೊರಮಾವಿನ ಎಸ್ಎಲ್ವಿ ವಜ್ರ ಅಪಾರ್ಟ್ಮೆಂಟ್ಗೆ ನೀರು ನುಗ್ಗಿ ಬೆಲೆಬಾಳುವ ಕಾರುಗಳು ಜಲಾವೃತವಾಗಿವೆ. ಯಾವುದೇ ತುರ್ತು ಸೇವೆ ಸಿಗದೆ ನಿವಾಸಿಗಳು ಮತ್ತು ಸ್ಥಳೀಯರು ಪರದಾಡುವಂತಾಗಿದ್ದು, ಮಳೆಯ ಇಂದಿನ ಸಂಪೂರ್ಣ ಮಾಹಿತಿ ಇಲ್ಲಿದೆ.