ಬೇಸಿಗೆಯ ಶಾಖವನ್ನು ಕಡಿಮೆ ಮಾಡಲು ಹೆಸರುಕಾಳಿನ ಜ್ಯೂಸ್ ಅಥವಾ ಪಾನಕ ಅತ್ಯುತ್ತಮ ಮತ್ತು ಆರೋಗ್ಯಕರ ಪಾನೀಯವಾಗಿದೆ. ನೆನೆಸಿದ ಹೆಸರುಕಾಳು, ಬೆಲ್ಲ/ಕಲ್ಲುಸಕ್ಕರೆ, ಏಲಕ್ಕಿ ಮತ್ತು ತೆಂಗಿನತುರಿ ಬಳಸಿ ಇದನ್ನು ಸುಲಭವಾಗಿ ತಯಾರಿಸಬಹುದು. ಇದು ದೇಹಕ್ಕೆ ತಕ್ಷಣದ ತಂಪು ಮತ್ತು ಶಕ್ತಿ ನೀಡುತ್ತದೆ. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.