ಸಿನಿಮಾ ನೋಡಲು ಸ್ನೇಯಿತರ ಜೊತೆ ತೆರಳಿದ್ದ ಮಹಿಳಾ ಟೆಕ್ಕಿಯೋರ್ವರು ವಾಶ್ ರೂಂಗೆ ತೆರಳಿದ್ದ ವೇಳೆ ಅಪ್ರಾಪ್ತನೋರ್ವ ಖಾಸಗಿ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದನ್ನು ಕಂಡ ಘಟನೆ ಬೆಂಗಳೂರಿನ ಸಂದ್ಯಾ ಥಿಯೇಟರ್ನಲ್ಲಿ ನಡೆದಿದೆ. ಮಹಿಳಾ ಟೆಕ್ಕಿ ದೂರಿನ ಮೇರೆ ಸಿಬ್ಬಂದಿ ಮತ್ತು ಥಿಯೇಟರ್ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.