ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಈ ಜಾತ್ರೆಯ ವಿಶೇಷವೆಂದರೆ, ರಥವನ್ನು ಬಲವಾದ ಹಗ್ಗಗಳ ಬದಲು ಕಾಡಿನ ಹಂಬುಗಳನ್ನು ಬಳಸಿ ಎಳೆಯಲಾಗುತ್ತದೆ. ಬೇಸಿಗೆಯಲ್ಲೂ ದೇವರ ಮೇಲೆ ಹಿಮ ಸುರಿಯುವುದು ಇಲ್ಲಿನ ಮಹಿಮೆ. ಭಕ್ತರ "ಗೋವಿಂದಾ" ಜಯಘೋಷಗಳೊಂದಿಗೆ ರಥೋತ್ಸವ ಸಂಪನ್ನಗೊಂಡಿದೆ.