ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಹೊಳೆನರಸೀಪುರದಲ್ಲಿ ರಥಕ್ಕೆ ಬಟ್ಟೆ ಅಲಂಕಾರ ಮಾಡುವ ವಿಚಾರಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆದಿದೆ. ತಾಲ್ಲೂಕು ಆಡಳಿತವು ಸಭೆಯ ತೀರ್ಮಾನಕ್ಕೆ ವಿರುದ್ಧವಾಗಿ ಬಟ್ಟೆ ಕಟ್ಟಿಸಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬಟ್ಟೆ ತೆಗೆಯಲು ಯತ್ನಿಸಿದ್ದು, ಪರಿಸ್ಥಿತಿ ವಾಗ್ವಾದಕ್ಕೆ ತಿರುಗಿದೆ.