ಹೋಳಿ ಹಬ್ಬಕ್ಕೆ ಮನೆಯಲ್ಲೊಮ್ಮೆ ಪಾನ್ ಶಾಟ್ಸ್ ಮಾಡಿ ಸವಿಯಿರಿ. ಇದು ಊಟದ ನಂತರ ಮಾಡಿ ಕುಡಿಯಬಹುದಾದ ಅತ್ಯಂತ ಜನಪ್ರಿಯ ರಿಫ್ರೆಶ್ ಮತ್ತು ಸಿಹಿಯಾದ ಭಾರತೀಯ ಪಾನೀಯವಾಗಿದೆ. ತಾಜಾ ವೀಳ್ಯದೆಲೆ ಮಸಾಲಾ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದು ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಜೀರ್ಣಕ್ರಿಯೆಗೆ ಸಹಕಾರಿಯಾದ ತಂಪಾದ ಪಾನೀಯವಾಗಿದೆ. ತಾಜಾ ವೀಳ್ಯದೆಲೆ, ಗುಲ್ಕಂಡ್, ವೆನಿಲ್ಲಾ ಐಸ್ ಕ್ರೀಮ್ ಮತ್ತೆ ಸ್ವಲ್ಪ ಹಾಲಿದ್ದರೆ ಇದನ್ನು ಮಾಡಿ ನೋಡಿ. ಈ ರೆಸಿಪಿ ವಿಡಿಯೋವನ್ನು foodklick ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.