ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನದ ಅಂಗವಾಗಿ ವಿಂಟೇಜ್ ಕಾರುಗಳ ವಿಶೇಷ ಱ್ಯಾಲಿ ನಡೆಯಿತು. ಈ ಱ್ಯಾಲಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸುಮಾರು 75ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. ಈ ಕಾರುಗಳಲ್ಲಿ ಕೆಲವು ಬೆಂಗಳೂರು ಪೊಲೀಸರು ಈ ಹಿಂದೆ ಬಳಸುತ್ತಿದ್ದ ವಾಹನಗಳಾಗಿರೋದು ವಿಶೇಷವಾಗಿತ್ತು.