ಚೈನೀಸ್ ಭೇಲ್ ಒಂದು ಜನಪ್ರಿಯ ಇಂಡೋ- ಚೈನೀಸ್ ಸ್ಟ್ರೀಟ್ ಫುಡ್. ನೂಡಲ್ಸ್, ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಸ್ಪ್ರಿಂಗ್ ಆನಿಯನ್ ಅನ್ನು ಶೆಜ್ವಾನ್ ಸಾಸ್, ಸೋಯಾ ಸಾಸ್ ಮತ್ತು ಟೊಮೆಟೊ ಕೆಚಪ್ನೊಂದಿಗೆ ಬೆರೆಸಿ ತಯಾರಿಸುವ ಗರಿಗರಿ ಲಘು ಆಹಾರವಾಗಿದೆ. ಸ್ವಲ್ಪ ಖಾರವಾಗಿದ್ದರೂ ಕೂಡ ತಿನ್ನುವುದಕ್ಕೆ ತುಂಬಾ ರುಚಿಯಾಗಿರುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿ 15- 20 ನಿಮಿಷಗಳಲ್ಲಿ ತಯಾರಿಸಬಹುದು. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು shanknagkam_pureveg_food ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಬಹುದಾಗಿದೆ.