ಮನೆಯಲ್ಲಿಯೇ ಕೇವಲ 3-4 ಪದಾರ್ಥಗಳನ್ನು ಬಳಸಿ, ಯಾವುದೇ ಕೃತಕ ಬಣ್ಣ ಬಳಸದೆ ರುಚಿಕರವಾದ ಮಾವಿನ ಹಣ್ಣಿನ ಐಸ್ ಕ್ರೀಮ್ (Mango Ice Cream) ಮಾಡಬಹುದು. ಮಾವಿನ ಹಣ್ಣಿನ ತಿರುಳು, ವಿಪ್ಪಿಂಗ್ ಕ್ರೀಮ್ ಮತ್ತು ಕಂಡೆನ್ಸ್ಡ್ ಮಿಲ್ಕ್ ಮಿಶ್ರಣ ಮಾಡಿ ಫ್ರೀಜ್ ಮಾಡಿದರೆ, ಮೃದುವಾದ ಐಸ್ ಕ್ರೀಮ್ ಸಿದ್ಧವಾಗುತ್ತದೆ. ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು thecrazyindianchef ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಮನೆಯಲ್ಲಿಯೇ ಐಸ್ ಕ್ರೀಂ ಮಾಡಿ ಸವಿಯಿರಿ.