ಮನೆಯಲ್ಲಿ ಪಪ್ಪಾಯ ಇದ್ದರೆ ನೀವು ಈ ಒಂದು ರೆಸಿಪಿಯನ್ನು ಕಡ್ಡಾಯವಾಗಿ ಮಾಡಲೇಬೇಕು. ಹೌದು, ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಇದಾಗಿದ್ದು ಸುಲಭವಾಗಿ ಮಾಡಬಹುದಾಗಿದೆ. ಮೊಟ್ಟೆಯನ್ನು ಹಾಕದೆಯೇ ಕೇವಲ 3 ಪದಾರ್ಥಗಳನ್ನು ಬಳಸಿ ಈ ಒಂದು ಜೆಲ್ಲಿಯನ್ನು ತಯಾರಿಸಬಹುದು. ತಾಜಾ ಮಾಗಿದ ಪಪ್ಪಾಯಿ ಇದ್ದರೆ ಸಾಕು ಈ ಜೆಲ್ಲಿ ರೆಡಿಯಾಗುತ್ತದೆ. ಅಷ್ಟೇಅಲ್ಲ ಇದಕ್ಕೆ ಯಾವುದೇ ರೀತಿಯ ಕೃತಕ ಬಣ್ಣವಿಲ್ಲದೆಯೇ ಮಾಡಬಹುದು. ಕೇವಲ ಶುದ್ಧ ಹಣ್ಣಿನ ಪರಿಮಳವೇ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಈ ರೆಸಿಪಿಯನ್ನು themoodychef1995 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಮಾಡಿ ನೋಡಿ.