ಈರುಳ್ಳಿ ಮತ್ತು ರೋಸ್ಮರಿಯಿಂದ ತಯಾರಿಸಿದ ನೈಸರ್ಗಿಕ ಶಾಂಪೂ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು, ತಲೆಹೊಟ್ಟನ್ನು ಕಡಿಮೆ ಮಾಡಲು ಜೊತೆಗೆ ಕೂದಲಿಗೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಸ್ವಲ್ಪ ಗ್ಲಿಸರಿನ್ ಈರುಳ್ಳಿ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಿದ್ರೆ ಇನ್ನೇಕೆ ತಡ ಮನೆಯಲ್ಲಿಯೇ ಒಮ್ಮೆ ಮಾಡಿ ನೋಡಿ. ದುಡ್ಡು ಉಳಿಯುತ್ತೆ, ಕೂದಲು ಕೂಡ ಚೆನ್ನಾಗಿ ಬೆಳೆಯುತ್ತದೆ. ದೊಡ್ಡವರು ಮಾತ್ರವಲ್ಲ ಮಕ್ಕಳು ಕೂಡ ಇದನ್ನು ಬಳಕೆ ಮಾಡಬಹುದು.