ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿದ ಘಟನೆ ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗ್ರಾಮದ ಬಳಿ ಸಂಭವಿಸಿದೆ. ಚಿತ್ರದುರ್ಗದಿಂದ ದಾವಣಗೆರೆ ಕಡೆ ಹೋಗುತ್ತಿದ್ದ ಲಾರಿ ಡಿವೈಡರ್ ದಾಟಿ ದಾವಣಗೆರೆಯಿಂದ ಚಿತ್ರದುರ್ಗ ಕಡೆ ತೆರಳುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ.