ತಾಯಿ ನಿಧನದ ನೋವಿನಲ್ಲೂ ಹೊಸಪೇಟೆಯ ಮಹಾವೀರ ಶಾಲೆಯ ವಿದ್ಯಾರ್ಥಿನಿ ಸಬಾ ಫರೀನ್ SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಪರೀಕ್ಷೆ ಆರಂಭವಾಗಲು ಕೇವಲ 10 ದಿನಗಳು ಬಾಕಿ ಇರುವಾಗಲೇ ಸಬಾ ಫರೀನ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಈ ನೋವಲ್ಲೂ ಪರೀಕ್ಷೆ ಬರೆದು ಶೇ.95ರಷ್ಟು ಅಂಕ ಗಳಿಸಿ, ಶಾಲೆಗೆ ಟಾಪರ್ ಆಗಿದ್ದಾರೆ.