ಹೊಸಕೋಟೆಯಲ್ಲಿ ನಡೆದ ಘಟನೆ, ಆರಂಭದಲ್ಲಿ ಅಪಘಾತವೆಂದು ನಂಬಲಾಗಿತ್ತು. ಆದರೆ, ಸ್ಥಳೀಯರ ಅನುಮಾನ, ಪೊಲೀಸರ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯಿಂದ ಇದು ಕೊಲೆ ಎಂದು ದೃಢಪಟ್ಟಿದೆ. ಕುಡಿತದ ಪಾರ್ಟಿಯ ನೆಪದಲ್ಲಿ ಸ್ನೇಹಿತನನ್ನು ಕರೆಸಿ ಕೊಲೆ ಮಾಡಿ, ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.