ಸಾಮಾನ್ಯವಾಗಿ ಪಾತ್ರೆ ತೊಳೆಯುವಾಗ ಜಿಡ್ಡಿನ ಪಾತ್ರೆ ಅಥವಾ ತಲ ಹಿಡಿದ ಪಾತ್ರೆಗಳನ್ನು ತೊಳೆಯುವುದು ಸುಲಭವಲ್ಲ. ಅದೊಂದು ರೀತಿಯ ಸವಾಲು. ಅದರಲ್ಲಿಯೂ ಸೋಪು, ಡಿಟರ್ಜೆಂಟ್ ಯಾವುದೇ ಹಾಕಿ ತೊಳೆದರೂ ಅದು ಸರಿಯಾಗಿ ಕ್ಲೀನ್ ಆಗುವುದಿಲ್ಲ. ಆಗ ನೀವು ಈ ಒಂದು ಟ್ರಿಕ್ ಮಾಡಿ ನೋಡಬಹುದು. ಕೇವಲ ಕೆಲವೇ ಕೆಲವು ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಇದನ್ನು ತಯಾರು ಮಾಡಬಹುದಾಗಿದ್ದು ಈ ವಿಡಿಯೋವನ್ನು faizmeeran_ig ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಪಾತ್ರೆ ಹೊಳೆಯುವಂತೆ ತೊಳೆಯಲು ಈ ಒಂದು ವಿಧಾನವನ್ನು ಅನುಸರಿಸಿ ನೋಡಿ.