ಮನೆಯಲ್ಲಿ ಏನಾದರೂ ಕುರುಕಲು ತಿಂಡಿ ಇದ್ದರೆ ಅದಕ್ಕಿಂತ ಖುಷಿ ಬೇರೆ ಏನ್ ಇರುತ್ತೆ ಅಲ್ವಾ? ಆದ್ರೆ ಕರಿದ ತಿನಿಸುಗಳನ್ನು ತಿನ್ನಬೇಕು ಅಂತ ಅನ್ನಿಸಿದಾಗ ಒಂದೇ ರೀತಿಯ ತಿಂಡಿ ತಿನ್ನುವ ಬದಲು ತಕ್ಷಣ ಮಾಡಿ ತಿನ್ನಬಹುದಾದ ಸ್ನಾಕ್ಸ್ ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ನೀವು ಕೂಡ ಸಿಂಪಲ್ ಆಗಿ ಬೇಗ ಮಾಡಬಹುದಾದ ತಿಂಡಿಗಳನ್ನು ಹುಡುಕುತ್ತಿದ್ದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಲೇ ಬೇಕು. ಈ ತಿಂಡಿಯ ವಿಡಿಯೋವನ್ನು ramas_tiffin ಎನ್ನುವಂತಹ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಕೂಡ ಒಮ್ಮೆ ಈ ಬಿಳಿ ಚಕ್ಲಿಯನ್ನು ಟ್ರೈ ಮಾಡಿ ನೋಡಿ.