ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವುದರಲ್ಲಿ ಎಳ್ಳಿನ ಜ್ಯೂಸ್ ಕೂಡ ಒಂದು. ಅಷ್ಟೇಅಲ್ಲ ಇದು ಆರೋಗ್ಯಕ್ಕೂ ಒಳ್ಳೆಯದು. ಹಾರ್ಮೋನುಗಳ ಸಮತೋಲನ ಮಾಡಲು, ಕಬ್ಬಿಣ ವರ್ಧಕವಾಗಿ, ಮೂಳೆ ಆರೋಗ್ಯಕ್ಕೆ ಎಲ್ಲಕ್ಕೂ ಇವು ಸಹಕಾರಿಯಾಗಿದೆ. ಸುಲಭದಲ್ಲಿ ಹೇಳುವುದಾದರೆ ಬೇಸಿಗೆಯ ಬಿಸಿಲಿಗೆ ಹೇಳಿ ಮಾಡಿಸಿದ, ಕ್ಯಾಲ್ಸಿಯಂ ಭರಿತ ಆರೋಗ್ಯಕರ ಪಾನೀಯವಾಗಿದೆ. ಬಿಳಿ ಎಳ್ಳು, ಬೆಲ್ಲ, ತೆಂಗಿನ ಹಾಲು/ಹಸುವಿನ ಹಾಲು ಮತ್ತು ಏಲಕ್ಕಿ ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.