ತಂಪಾದ ಮಸಾಲಾ ಮಜ್ಜಿಗೆಯು ಬೇಸಿಗೆಗೆ ಅತ್ಯುತ್ತಮ ಆರೋಗ್ಯಕರ ಪಾನೀಯವಾಗಿದೆ. ಇದನ್ನು ರುಚಿಕರವಾಗಿಸಲು, ಮೊಸರು, ತಣ್ಣನೆಯ ನೀರು, ಕೊತ್ತಂಬರಿ ಸೊಪ್ಪು, ಪುದೀನಾ, ಶುಂಠಿ, ಹಸಿರು ಮೆಣಸಿನಕಾಯಿ, ಜೀರಿಗೆ ಪುಡಿ, ಇಂಗು ಮತ್ತು ಉಪ್ಪನ್ನು ಬ್ಲೆಂಡರ್ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬಹುದು. ಐಸ್ ಕ್ಯೂಬ್ಗಳನ್ನು ಸೇರಿಸಿ ತಣ್ಣಗೆ ಕುಡಿಯಬಹುದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹವನ್ನು ತಂಪಾಗಿರಿಸುತ್ತದೆ. ಈ ರೆಸಿಪಿ ಮಾಡುವ ವಿಧಾನವನ್ನು shilpashree_cooking_creations ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.