ರಾಜ್ಮಾ ಕಬಾಬ್ ಒಂದು ರುಚಿಕರವಾದ, ಪ್ರೋಟೀನ್ ಭರಿತ ಸಸ್ಯಾಹಾರಿ ಸ್ಟಾರ್ಟರ್ ಆಗಿದೆ. ಬೇಯಿಸಿದ ರಾಜ್ಮಾ, ಆಲೂಗಡ್ಡೆ, ಅವಕಾಡೊ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸುವ ಈ ಕಬಾಬ್, ಹೊರಗೆ ಗರಿಗರಿಯಾಗಿ ಮತ್ತು ಒಳಗೆ ಮೃದುವಾಗಿರುತ್ತದೆ. ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು kriti_kaur_dhiman ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಕೂಡ ಟ್ರೈ ಮಾಡಿ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಪುದೀನಾ ಚಟ್ನಿಯೊಂದಿಗೆ ಸವಿಯಬಹುದು.