ಚಳಿಗಾಲದಲ್ಲಿ ಖಾರ ಖಾರವಾಗಿ ತಿನ್ನಲು ಏನಾದರೂ ಬೇಕು ಎನಿಸುವುದು ಸಹಜ. ಆದರೆ ಸಿಂಪಲ್ ಆಗಿ ಏನಾದರೂ ಮಾಡಿ ತಿನ್ನಬೇಕು ಅಂದ್ರೆ ಏನು ಮಾಡಿ ತಿನ್ನಬಹುದು ಎಂದು ಚಿಂತೆಯಾಗುತ್ತದೆ. ಹಾಗಿದ್ದರೆ ನೀವು trendytastes_1 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೆಯಾದ ಸ್ಪೈಸಿ ಬೆಳ್ಳುಳ್ಳಿ ಕಾರ್ನ್ ರೆಸಿಪಿಯನ್ನು ಟ್ರೈ ಮಾಡಲೇ ಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಅಲ್ಲ, ಚಳಿಗಾಲದ ಸಂಜೆಯಲ್ಲಿ ಏನನ್ನಾದರೂ ಚಟ್ ಪಟ್ ಎಂದು ತಿನ್ನಬೇಕು ಅನಿಸಿದಾಗ ಇದನ್ನು ಫಟಾ ಫಟ್ ಎಂದು ಮಾಡಿ ತಿನ್ನಬಹುದು. ಖಾರ ಖಾರವಾಗಿರುವುದರಿಂದ ತಿನ್ನುವುದಕ್ಕೂ ರುಚಿ ಮಾಡುವುದಕ್ಕೂ ತುಂಬಾ ಸಿಂಪಲ್. ಹಾಗಿದ್ರೆ ಇನ್ನೇಕೆ ತಡ ನೀವು ಟ್ರೈ ಮಾಡಿ ನೋಡಿ.