ಆರೋಗ್ಯಕರ ಆಹಾರ ಸೇವನೆ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದರೆ ಕೆಲವರ ಮನಸ್ಸಿನಲ್ಲಿ ಆರೋಗ್ಯಕರ ಆಹಾರ ರುಚಿಯಾಗಿರುವುದಿಲ್ಲ ಎಂಬ ಅನುಮಾನ ಇರುತ್ತದೆ. ಹಾಗಾಗಿ ಅವರು ಜಂಕ್ ಫುಡ್ ಗಳನ್ನೂ ಹೆಚ್ಚಾಗಿ ಇಷ್ಟ ಪಡುತ್ತಾರೆ. ನಿಮಗೂ ಇದೆ ರೀತಿಯ ಗೊಂದಲವಿದ್ದಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರೈತಾ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಈ ರೆಸಿಪಿ ವಿಡಿಯೋವನ್ನು bitaniskitchen ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಮಾಡುವುದಕ್ಕೂ ಕೂಡ ಬಹಳ ಸುಲಭ. ಹಾಗಿದ್ರೆ ಇನ್ನೇಕೆ ತಡ ಈಗಲೇ ಟ್ರೈ ಮಾಡಿ ನೋಡಿ.