ಸ್ಟಾರ್ ಫ್ರೂಟ್ ಹೆಸರನ್ನ ನೀವು ಕೇಳಿರಬಹುದು. ತಿನ್ನುವುದಕ್ಕೆ ಸ್ವಲ್ಪ ಹುಳಿ ಹುಳಿಯಾಗಿದ್ದರೂ ಕೂಡ ಇದನ್ನು ತಿನ್ನುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದರಿಂದ ಮಾಡುವ ಚಾಟ್ ತುಂಬಾ ಫೇಮಸ್. ಉಪ್ಪು, ಖಾರ ಬಿದ್ದಾಗ ಈ ಹಣ್ಣಿನ ರುಚಿ ದುಪ್ಪಟ್ಟಾಗುತ್ತದೆ. ಅಂದ ಹಾಗೆ ಇದರ ಚಾಟ್ ತಯಾರಿಸುವ ಸಿಂಪಲ್ ರೆಸಿಪಿಯನ್ನು tastetube1 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ.