ಕೋಲಾರ ನಗರದ ಮಿನಿ ಸ್ಟೇಡಿಯಂ ಬಳಿ ಭಾರೀ ಗಾತ್ರದ ಹಾವು ಕಾಣಿಸಿಕೊಂಡಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಈಜುಕೊಳದ ಬಳ ಕಾಮಗಾರಿ ಬಳಿ ಹಾವು ಕಂಡುಬಂದಿದ್ದು, ಕೂಡಲೇ ಉರಗರಕ್ಷಕ ಆನಂದ್ ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಬೃಹತ್ ಹಾವಿನ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.