ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಭಾರಿ ಗಾತ್ರದ ಹುಲಿಯೊಂದು ಸರ್ಪ್ರೈಸ್ ಕೊಟ್ಟಿದೆ. ಹತ್ತಿರದಲ್ಲೇ ಕಾಣಿಸಿಕೊಂಡ ಭಾರಿ ಗಾತ್ರದ ಹುಲಿಯ ವಿಡಿಯೋವನ್ನು ಪ್ರವಾಸಿಗರು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದು, ಸದ್ಯ ವೈರಲ್ ಆಗುತ್ತಿದೆ.