ಹೈದರಾಬಾದ್ನ ಜನಪ್ರಿಯ ಬಿರಿಯಾನಿ ಹೋಟೆಲ್ ಚೈನ್ಗಳು ₹70,000 ಕೋಟಿ ತೆರಿಗೆ ವಂಚನೆ ಮಾಡಿರುವುದು ಆದಾಯ ತೆರಿಗೆ ಇಲಾಖೆ (IT) ದಾಳಿಯಲ್ಲಿ ಬಯಲಾಗಿದೆ. ಐಟಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ, ಈ ಹೋಟೆಲ್ಗಳು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಪಾವತಿಸದೆ ಹೊಸ ವಂಚನಾ ವಿಧಾನಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಈ ಅಕ್ರಮದಿಂದ ಆರ್ಥಿಕತೆಗೆ ದೊಡ್ಡ ನಷ್ಟವಾಗಿದೆ.