ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದ ಅನಾಥ ಮರಿ ಕೋತಿಯ ವಿಡಿಯೋ ಈಗ ಎಲ್ಲರ ಹೃದಯ ಗೆದ್ದಿದೆ. ಅಮ್ಮನನ್ನು ಕಳೆದುಕೊಂಡಿದ್ದ ಈ ಮರಿಗೆ ಗೊಂಬೆಯೇ ಕುಟುಂಬವಾಗಿತ್ತು. ಮೊದಲು ಇದನ್ನು ದೂರವಿಟ್ಟಿದ್ದ ಇತರ ಕೋತಿಗಳು, ಇದೀಗ ಪಂಚ್-ಕುನ್ ಸೇರಿದಂತೆ ಎಲ್ಲವೂ ಅದನ್ನು ತಮ್ಮ ಮಕ್ಕಳಂತೆ ಹಾರೈಕೆ ಮಾಡುತ್ತಿವೆ. ಈ ಮರಿ ಕೋತಿ ತಿರಸ್ಕಾರದಿಂದ ವಾತ್ಸಲ್ಯದ ಕಡೆಗೆ ಸಾಗಿರುವ ವೈರಲ್ ವಿಡಿಯೋ ಲಕ್ಷಾಂತರ ಮಂದಿಯನ್ನು ಭಾವುಕಗೊಳಿಸಿದೆ.