ಉತ್ತರ ಕನ್ನಡದ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅರ್ಚಕರು ದಕ್ಷಿಣೆ ಹಂಚಿಕೆಗಾಗಿ ಭಕ್ತರ ಮುಂದೆಯೇ ಜಗಳವಾಡಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದೈವ ಸನ್ನಿಧಿಯಲ್ಲೇ ಹಣಕ್ಕಾಗಿ ನಡೆದ ಈ ಕಿತ್ತಾಟ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ. ಭಕ್ತರ ನಂಬಿಕೆಗೆ ಧಕ್ಕೆ ತಂದ ಈ ಘಟನೆಯು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.