ಬೆಂಗಳೂರಿನ ಜಗತ್ಪ್ರಸಿದ್ಧ ಐಐಎಂಬಿ ಸಂಸ್ಥೆಯ ಎದುರಿಗಿನ ಬನ್ನೇರುಘಟ್ಟ ರಸ್ತೆ ತೀವ್ರ ಅವ್ಯವಸ್ಥೆಗೊಳಗಾಗಿದೆ. ಡಾಂಬರು ಇಲ್ಲದೆ ಜಲ್ಲಿಕಲ್ಲುಗಳು ಮತ್ತು ಗುಂಡಿಗಳಿಂದ ತುಂಬಿರುವ ಈ ರಸ್ತೆಯಲ್ಲಿ ಸಂಚಾರ ವಾಹನ ಸವಾರರಿಗೆ ನರಕಯಾತನೆಯಾಗಿದೆ. ವಾಹನಗಳಿಂದೇಳುವ ಧೂಳು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಮತಟ್ಟಾಗಿಲ್ಲದ ರಸ್ತೆಯಿಂದ ಅಪಘಾತಗಳ ಭೀತಿಯೂ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.