ಉತ್ತರಾಖಂಡದ ಐಐಟಿ ರೂರ್ಕಿಯಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕ್ಯಾಂಪಸ್ ತುಂಬಾ ನೀರಿನಿಂದ ತುಂಬಿಹೋಗಿತ್ತು. ರಸ್ತೆಗಳು ಸಹ ಕಾಣುತ್ತಿರಲಿಲ್ಲ. ಹೀಗಾಗಿ, ಐಐಟಿ ವಿದ್ಯಾರ್ಥಿಗಳು ಮರದ ಹಲಗೆಗಳಿಂದ ತಾತ್ಕಾಲಿಕ ಬೋಟ್ ನಿರ್ಮಿಸಿಕೊಂಡು ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಜನರು ಶ್ಲಾಘಿಸುತ್ತಿದ್ದಾರೆ. ನಿರಂತರ ಮಳೆಯಿಂದಾಗಿ, ಐಐಟಿ ರೂರ್ಕಿ ಕ್ಯಾಂಪಸ್ ಕೂಡ ಜಲಾವೃತವಾಯಿತು.