ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಅದರಲ್ಲಿಯೂ ಬದಲಾಗುತ್ತಿರುವ ಹವಾಮಾನದಲ್ಲಿ ನಮ್ಮ ದೇಹವನ್ನು ಕಾಯಿಲೆಗಳಿಂದ ದೂರ ಇಟ್ಟುಕೊಳ್ಳಬೇಕು ಎಂದರೆ ಆಹಾರದಲ್ಲಿ ಒಳ್ಳೆಯ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಈ ರೀತಿ ರೋಗಗಳಿಂದ ದೂರವಿರಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಡ್ರಮ್ ಸ್ಟಿಕ್ ಸೂಪ್ ಮಾಡಿ ಸವಿಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಅಷ್ಟು ಮಾತ್ರವಲ್ಲ ಮಾಡುವುದಕ್ಕೂ ಕೂಡ ಬಹಳ ಸುಲಭ. ಇದನ್ನು yourcookbookofficial ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಈ ರೆಸಿಪಿಯನ್ನು ಮಾಡಿ ಸವಿಯಬಹುದು.