ದೆಹಲಿ ಪೊಲೀಸರು ತೋರಿರುವ ಮಾನವೀಯತೆ ಹಾಗೂ ರಾಷ್ಟ್ರಪ್ರೇಮದ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ. ದೆಹಲಿಯ ನರೇಲಾ ಪ್ರದೇಶದಲ್ಲಿ ಸಾವನ್ನಪ್ಪಿದ ರಾಷ್ಟ್ರಪಕ್ಷಿ ನವಿಲಿಗೆ ಪೊಲೀಸರು ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಿ, ಅತ್ಯಂತ ಗೌರವಪೂರ್ವಕವಾಗಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.