2026-27ನೇ ಆರ್ಥಿಕ ವರ್ಷದಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಅಮೆರಿಕವನ್ನೇ ಹಿಂದಿಕ್ಕಿದೆ. ಈ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಆಗುವ ಜಿಡಿಪಿ ಹೆಚ್ಚಳದಲ್ಲಿ ಚೀನಾದ ಕೊಡುಗೆ ಶೇ. 26.6ರಷ್ಟಾಗಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಕೊಡುಗೆಯಲ್ಲಿ ಭಾರತವು ಅಮೆರಿಕವನ್ನೂ ಮೀರಿಸಲಿದೆ. ವಿಶ್ವದ ಐದನೆ ಅತಿದೊಡ್ಡ ಆರ್ಥಿಕತೆಯಾದರೂ 2026ರಲ್ಲಿ ಜಿಡಿಪಿ ಹೆಚ್ಚಳಕ್ಕೆ ನೀಡುವ ಕೊಡುಗೆಯಲ್ಲಿ ಭಾರತ 2ನೇ ಸ್ಥಾನ ಪಡೆಯಲಿದೆ ಎನ್ನುವುದು ಗಮನಾರ್ಹ.