ಭಾರತವು ಪ್ರವಾಹ ಪೀಡಿತ ನೇಪಾಳಕ್ಕೆ ಇಂದು 10 ಟನ್ ಪರಿಹಾರ ಸಾಮಗ್ರಿಗಳ ಮೂರನೇ ಕಂತನ್ನು ರವಾನಿಸಿದೆ. ಇದರೊಂದಿಗೆ 11 ಸದಸ್ಯರ ವೈದ್ಯರು ಮತ್ತು ಪ್ಯಾರಾಮೆಡಿಕ್ಸ್ ತಂಡ ಹಾಗೂ ಸುರಂಗ ರಕ್ಷಣಾ ಕಾರ್ಯಾಚರಣೆಯ ಮೌಲ್ಯಮಾಪನಕ್ಕಾಗಿ ಪರಿಶೀಲನಾ ತಂಡವನ್ನು ಕಳುಹಿಸಿಕೊಡಲಾಗಿದೆ. "10 ಟನ್ ಮಾನವೀಯ ನೆರವನ್ನು ಹೊತ್ತ ಮೂರನೇ ವಿಮಾನವು ಕಠ್ಮಂಡುವಿಗೆ ತೆರಳಿದೆ. ಈ ಪರಿಹಾರ ಸಾಮಗ್ರಿಗಳಲ್ಲಿ ಪೋರ್ಟಬಲ್ ಜನರೇಟರ್ ಸೆಟ್ಗಳು, ಡಿಗ್ನಿಟಿ ಕಿಟ್ಗಳು, ಆಹಾರದ ಪ್ಯಾಕೆಟ್ಗಳು ಮತ್ತು ನೀರು ಶುದ್ಧೀಕರಣ ಮಾತ್ರೆಗಳು ಸೇರಿವೆ. ಜೊತೆಗೆ 11 ಸದಸ್ಯರ ವೈದ್ಯರು, ಪ್ಯಾರಾಮೆಡಿಕ್ಸ್ ತಂಡ ಮತ್ತು ಸುರಂಗ ರಕ್ಷಣಾ ಕಾರ್ಯಾಚರಣೆಯ ಪರಿಶೀಲನಾ ತಂಡವು ವಿಮಾನದಲ್ಲಿದೆ. ನೇಪಾಳದ ಪ್ರಸ್ತುತ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಿಗೆ ಭಾರತವು ತನ್ನ ಬೆಂಬಲವನ್ನು ಮುಂದುವರಿಸಿದೆ" ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.