ದೇಶದಲ್ಲಿ ಮಾಲಿನ್ಯ ಮುಕ್ತ ಸಾರಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿನ (Hydrogen Train) ಸಂಚಾರಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಹೈಡ್ರೋಜನ್ ಮತ್ತು ಗಾಳಿಯಲ್ಲಿನ ಆಮ್ಲಜನಕದ ರಾಸಾಯನಿಕ ಪ್ರಕ್ರಿಯೆಯಿಂದ ವಿದ್ಯುತ್ ಉತ್ಪಾದಿಸಿ ಚಲಿಸುವ ಈ ರೈಲು, ಕೇವಲ ನೀರಿನ ಆವಿಯನ್ನಷ್ಟೇ ಹೊರಸೂಸುವುದರಿಂದ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಒಮ್ಮೆಗೆ 2,600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.