ಇಂಡೋನೇಷ್ಯಾದಲ್ಲಿ 'ಅನಾಕ್ ಕ್ರಾಕಟೋ' ಜ್ವಾಲಾಮುಖಿ ಮತ್ತೆ ಭೀಕರವಾಗಿ ಸ್ಫೋಟಗೊಂಡಿದ್ದು, ಪ್ರಕೃತಿಯ ವಿಕೋಪಕ್ಕೆ ದೇಶವು ಮತ್ತೊಮ್ಮೆ ಸಾಕ್ಷಿಯಾಗಿದೆ. ಸ್ಫೋಟದ ತೀವ್ರತೆಗೆ ಬೂದಿ ಮತ್ತು ಹೊಗೆಯು ಬಾನಿನ 50,000 ಅಡಿ ಎತ್ತರಕ್ಕೆ ಚಿಮ್ಮಿದ್ದು, 2.7 ಲಕ್ಷಕ್ಕೂ ಹೆಚ್ಚು ಜನರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದ ಸಾಲು ಸಾಲು ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ.