ಮಖಾನ ಚಾಟ್ (ಫಾಕ್ಸ್ ನಟ್ಸ್/ಕಮಲದ ಬೀಜ) ಫೈಬರ್ ಮತ್ತು ಪ್ರೋಟೀನ್ನಿಂದ ಸಮೃದ್ಧವಾಗಿರುವ ಆರೋಗ್ಯಕರ ತಿಂಡಿ. ಕಡಿಮೆ ಕ್ಯಾಲೋರಿ ಮತ್ತು ರುಚಿಕರವಾಗಿರುವ ಈ ತಿಂಡಿಯನ್ನು ತಕ್ಷಣ ಮಾಡಿ ಸವಿಯಬಹುದಾದ್ದರಿಂದ ಸಂಜೆಯ ತಿಂಡಿಗೆ ಮಾಡಬಹುದು. ಹುರಿದ ಮಖಾನಾಗಳನ್ನು ಮೊಸರು, ಹಸಿರು ಚಟ್ನಿ, ಸಿಹಿ ಚಟ್ನಿ ಮತ್ತು ಮಸಾಲೆಗಳೊಂದಿಗೆ ಬೆರೆಸಿ ಇದನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು udaipur_food_zone ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.