ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಗೊಳ್ಳಲು ಹೆಚ್ಚಿನ ಉಚಿತ ಟಿಕೆಟ್ಗಳಿಗೆ ಬೇಡಿಕೆ ಇಟ್ಟಿದ್ದು ಕಾರಣ ಎಂಬ ಕುರಿತು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಇತರ ಎಂಎಲ್ಎಗಳು ಕೇಳಿದರು. ಅದಕ್ಕಾಗಿ ನಾನೇ ಮೈಮೇಲೆ ಹಾಕಿಕೊಂಡು ವ್ಯವಸ್ಥೆ ಮಾಡಿದೆ. ಬಿಜೆಪಿ ಅವರು ಹಾಗೂ ಗುಜರಾತ್ ಅವರು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಟಿಕೆಟ್ ಜಾಸ್ತಿ ಬೇಕಿತ್ತು , ವ್ಯಾಪಾರ ಜಾಸ್ತಿ ಆಗ್ಬೇಕಿತ್ತು ಅದಕ್ಕೆ ಡ್ರಾಮಾ ಮಾಡ್ತಿದ್ದಾರೆ ಎಂದು ಡಿಕೆಶಿ ಹೇಳಿದರು.