ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಹಿನ್ನೆಲೆ ಇರಾನ್ನಲ್ಲಿ ಇಂಟರ್ನೆಟ್ ಸಂಪರ್ಕ ಕಡಿತವಾಗಿ 1000 ಗಂಟೆ ಪೂರೈಸಿದೆ. ಇದು ಜಾಗತಿಕ ಇತಿಹಾಸದಲ್ಲೇ ಅತಿ ದೀರ್ಘಾವಧಿಯ ಇಂಟರ್ನೆಟ್ ಬ್ಲ್ಯಾಕ್ಔಟ್ ಆಗಿದೆ. ಭದ್ರತೆ ನೆಪದಲ್ಲಿ ಇರಾನ್ ಸರ್ಕಾರ ಫೆ. 28ರಿಂದ ಇಂದಿನವರೆಗೂ ದೇಶಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಜಾಗತಿಕ ವೆಬ್ಸೈಟ್ಗಳನ್ನು ಬಂದ್ ಮಾಡಿ, ಸ್ಥಳೀಯ ಇಂಟರ್ನೆಟ್ಗೆ ಮಾತ್ರ ಅವಕಾಶ ಕಲ್ಪಿಸಿದೆ.