ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ತೀವ್ರಗೊಂಡ ಯುದ್ಧದಿಂದ ಇರಾನ್ನ ಯುವ ಫುಟ್ಬಾಲ್ ಆಟಗಾರ್ತಿ ಸಾರಾ ಡಿದಾರ್ ಭಾವುಕರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ನಲ್ಲಿ ಪಾಲ್ಗೊಂಡ ಸಾರಾ, ತಮ್ಮ ತಾಯ್ನಾಡಿನ ಪರಿಸ್ಥಿತಿ ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾ ಕಣ್ಣೀರಿಟ್ಟಿದ್ದಾರೆ. ಯುದ್ಧದ ಭೀತಿ ಮತ್ತು ಅನಿಶ್ಚಿತತೆಯ ಕುರಿತು ಅವರ ಕಳವಳವು ಜಾಗತಿಕ ಗಮನ ಸೆಳೆದಿದೆ.