ಮಧ್ಯಪ್ರಾಚ್ಯದಲ್ಲಿ ಪರಮಾಣು ಯುದ್ಧದ ಭೀತಿ ಎದುರಾಗಿದೆ. ಅಮೆರಿಕ ಇನ್ನೊಮ್ಮೆ ದಾಳಿ ಮಾಡಿದರೆ ಯುರೇನಿಯಂ ಬಳಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ತನ್ನ ಭೂಪ್ರದೇಶದ ಮೇಲೆ ದಾಳಿ ನಡೆಸಿದರೆ, ಶಸ್ತ್ರಾಸ್ತ್ರ ದರ್ಜೆಯ ಅಂದರೆ ಶೇ 90ರಷ್ಟು ಶುದ್ಧತೆಯೆ ಯುರೇನಿಯಂ ಬಳಸುವುದಾಗಿ ಇರಾನ್ ಬಹಿರಂಗವಾಗಿ ಎಚ್ಚರಿಕೆ ನೀಡಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ವಕ್ತಾರ ಇಬ್ರಾಹಿಂ ರೆಜೈ ಈ ಮಾಹಿತಿ ನೀಡಿದ್ದಾರೆ.