ಹಲಸಿನ ಹಣ್ಣನ್ನು ತಿಂದು ಅದರ ಬೀಜವನ್ನು ಬಿಸಾಡುತ್ತೇವೆ. ಆದರೆ ಅವುಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ. ಹಲಸಿನ ಬೀಜಗಳಲ್ಲಿ ಪ್ರೋಟೀನ್, ನಿರೋಧಕ ಪಿಷ್ಟ (ಕರುಳಿನ ಆರೋಗ್ಯಕ್ಕೆ ಉತ್ತಮ) ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಅದಲ್ಲದೆ ಆರೋಗ್ಯಕರ ಮತ್ತು ರುಚಿಕರವಾದ ಹಲಸಿನ ಬೀಜದ ಲಡ್ಡನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು auraartofhealthyliving ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಹಲಸಿನ ಹಣ್ಣಿನ ಸೀಸನ್ ಮುಗಿಯುವುದರೊಳಗೆ ಒಮ್ಮೆ ಮಾಡಿ ನೋಡಿ.