ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಾಯಿಟೋನಿ ಗ್ರಾಮದಲ್ಲಿ 35 ಅಡಿ ಆಳದ ಹಾಳು ಬಾವಿಗೆ ಬಿದ್ದಿದ್ದ ರೈತನ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸ್ಥಳೀಯರಿಂದ ಸಾಧ್ಯವಾಗದಿದ್ದ ಕಾರ್ಯವನ್ನು ಅಗ್ನಿಶಾಮಕ ದಳದ ಅಧಿಕಾರಿ ಖಾಸೀಂಸಾಬ್ ಮತ್ತು ಸಹಾಯಕ ಅಧಿಕಾರಿ ದಾದಾಫೀರ್ ನೇತೃತ್ವದ ತಂಡ ಜೆಸಿಬಿ ಬಳಸಿ ಪಾರು ಮಾಡಿದೆ. ಸಕಾಲಕ್ಕೆ ಸ್ಪಂದಿಸಿದ ಸಿಬ್ಬಂದಿಯ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.