ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶ್ರೀ ರಾಮತೀರ್ಥ ಬೆಟ್ಟದ ಅರಣ್ಯ ಪ್ರದೇಶದಲ್ಲಿ ರಾತ್ರಿ 12-1 ಗಂಟೆ ಸುಮಾರಿಗೆ ಸುಮಾರು ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಗಸ್ತು ತಿರುಗುತ್ತಿದ್ದ ಪಿಎಸ್ಐ ಎಂ.ಎ. ವಾಲೇಕಾರ ಅವರ ಸಮಯೋಚಿತ ಮಾಹಿತಿಯಿಂದ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಭಾರಿ ಅನಾಹುತ ತಪ್ಪಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.