ಜಮ್ಮುವಿನಲ್ಲಿ ನಡೆದ ಸ್ಥಳೀಯ ಲೀಗ್ ಪಂದ್ಯವೊಂದರಲ್ಲಿ ಫುರ್ಖಾನ್ ಭಟ್ ಎಂಬ ಆಟಗಾರ ಬ್ಯಾಟಿಂಗ್ ಮಾಡುವಾಗ ತನ್ನ ಹೆಲ್ಮೆಟ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ ಧರಿಸಿದ್ದು, ಇದೀಗ ಅದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಫುರ್ಖಾನ್ ಭಟ್ ಮತ್ತು ಲೀಗ್ ಸಂಘಟಕ ಜಾಹಿದ್ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆ.