ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಭೋರ್ಗರೆಯುತ್ತಿದೆ. ರಜಾ ದಿನವಾದ ಭಾನುವಾರ ಜಲಪಾತದ ಸೌಂದರ್ಯ ಸವಿಯಲು ಅಪಾರ ಸಂಖ್ಯೆಯ ಪ್ರವಾಸಿಗರು ಹರಿದು ಬಂದಿದ್ದಾರೆ. ಪ್ರವಾಸಿಗರ ದಂಡಿನಿಂದಾಗಿ ಜೋಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಜೋಗದ ರಮಣೀಯ ದೃಶ್ಯ ನೋಡಲು ನೆರೆದಿದ್ದ ಜನಸಾಗರ ಗಮನ ಸೆಳೆದಿದೆ.