ಚಾಮರಾಜನಗರದ ಕಬಿನಿ ನಾಲೆಯಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವನ್ನು ಸ್ನೇಕ್ ಮಹೇಶ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಾಲೆಯಲ್ಲಿ ಬಿದ್ದು ಹೊರಬರಲಾಗದೆ ಪರದಾಡುತ್ತಿದ್ದ ಹೆಬ್ಬಾವನ್ನು ಎರಡು-ಮೂರು ಗಂಟೆಗಳ ಪ್ರಯತ್ನದ ನಂತರ ಸುರಕ್ಷಿತವಾಗಿ ಮೇಲೆತ್ತಲಾಯಿತು. ನಂತರ ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಸಾಹಸದ ವಿಡಿಯೋ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.