ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಸುಮಾರು 60 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನ ಕಬಿನಿ ಜಲಾಶಯದಿಂದ ಹೊರಗಡೆ ಬಿಡಲಾಗುತ್ತಿದೆ. ಇದೇ ವೇಳೆ ನುಗು ಜಲಾಶಯದಿಂದಲೂ ನೀರು ಬಿಡುಗಡೆಯಾಗುತ್ತಿದ್ದು, ಎರಡೂ ಜಲಾಶಯಗಳ ನೀರು ಹರಿದುಬರುತ್ತಿರುವುದರಿಂದ ಕಬಿನಿ ನದಿ ಮೈದುಂಬಿ ಹರಿಯುತ್ತಿದೆ.