ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸರ ಸಮರ್ಥ ಕಾರ್ಯಾಚರಣೆಯಿಂದ ಆರು ಮಂದಿ ದರೋಡೆಕೋರರನ್ನು ಬಂಧಿಸಲಾಗಿದೆ. ಇವರು ಬಾಗಲಕೋಟೆ ಸುತ್ತಮುತ್ತ ಆಟೋ, ಬೈಕ್ ಮತ್ತು ಸ್ವಿಫ್ಟ್ ಕಾರ್ ಬಳಸಿ ದರೋಡೆ ನಡೆಸುತ್ತಿದ್ದರು. ಬಂಧಿತರಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಕಳವು ಮಾಲು, ಒಂದು ಕಾರ್, ಒಂದು ಬೈಕ್, 6 ಮೊಬೈಲ್ಗಳು, ಕಬ್ಬಿಣದ ರಾಡು ಹಾಗೂ ಖಾರದ ಪುಡಿ ಜಪ್ತಿ ಮಾಡಲಾಗಿದೆ.