ಕನಕಗಿರಿ ಕನಕಾಚಲಪತಿ ರಥೋತ್ಸವದ ಹಿನ್ನೆಲೆಯಲ್ಲಿ ನಸುಕಿನ ಜಾವ ಅದ್ಧೂರಿ ಗರುಡೋತ್ಸವ ನಡೆಯಿತು. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಜರುಗಿದ ಈ ವೈಭವದಲ್ಲಿ ಕನಕಾಚಲಪತಿ ಸ್ವಾಮಿಯ ಮೂರ್ತಿಯ ಮೆರವಣಿಗೆ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಕೂಡ ಭಾಗವಹಿಸಿದ್ದರು.